ಡಂಪ್ಸ್ಟರ್ ಡೈವಿಂಗ್ ಎಂದರೆ ಫಿಶಿಂಗ್, ಸ್ಪಿಯರ್ ಫಿಶಿಂಗ್, ಗುರುತಿನ ಕಳ್ಳತನ ಮುಂತಾದ ಸೈಬರ್ ದಾಳಿಗಳಿಗೆ ವಂಚಕರು ದುರುಪಯೋಗಪಡಿಸಿಕೊಳ್ಳಬಹುದಾದ ಸೂಕ್ಷ್ಮ ಅಥವಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಗುರಿಯೊಂದಿಗೆ ಸಂಸ್ಥೆ ಅಥವಾ ವ್ಯಕ್ತಿಯ ಕಸ ಅಥವಾ ಮರುಬಳಕೆ ತೊಟ್ಟಿಗಳ ಮೂಲಕ ಹುಡುಕುವ ಅಭ್ಯಾಸವನ್ನು ಸೂಚಿಸುತ್ತದೆ.

ಇದು ಒಂದು ರೀತಿಯ ಸಾಮಾಜಿಕ ಎಂಜಿನಿಯರಿಂಗ್ ದಾಳಿಯಾಗಿದ್ದು, ವಂಚಕರ ದುರುಪಯೋಗಕ್ಕಾಗಿ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಲು ಮಾನವ ದುರ್ಬಲತೆಯನ್ನು ಬಳಸಿಕೊಳ್ಳುವುದನ್ನು ಅವಲಂಬಿಸಿದೆ. ಈ ಮಾಹಿತಿಯು ಗೌಪ್ಯ ದಾಖಲೆಗಳು, ತ್ಯಜಿಸಿದ ಕಂಪ್ಯೂಟರ್ ಉಪಕರಣಗಳು, ಅಥವಾ ಪಾಸ್‌ರ್ಡ್‌ಗಳು, ಖಾತೆ ಸಂಖ್ಯೆಗಳು, ಅಥವಾ ಇತರ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯಂತಹ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿರುವ ಇತರ ಭೌತಿಕ ಮಾಧ್ಯಮಗಳನ್ನು ಒಳಗೊಂಡಿರಬಹುದು.

ಉದಾಹರಣೆಗಳು:

  • ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿಗಳು ಇತ್ಯಾದಿಗಳ ಗೌಪ್ಯ ದಾಖಲೆಗಳ ತಿರಸ್ಕೃತ ಫೋಟೋಕಾಪಿಗಳ ದುರುಪಯೋಗ,

  • ಬಿಸಾಡಲಾದ ಕಂಪ್ಯೂಟರ್ ಉಪಕರಣಗಳ ದುರುಪಯೋಗ

  • ಅವಧಿ ಮೀರಿದ ಕ್ರೆಡಿಟ್ / ಡೆಬಿಟ್ ಕಾರ್ಡ್‌ಗಳ ದುರುಪಯೋಗ,

  • ಬ್ಯಾಂಕ್ ಸ್ಟೇಟ್ಮೆಂಟ್ ಪ್ರಿಂಟ್ ಔಟ್ ಇತ್ಯಾದಿಗಳ ದುರುಪಯೋಗ,